ಹೇ ಮೃದು ಸ್ವಭಾವ,
ನಿನಗಿದೆ ಹರುಷದ ಅಭಾವ,
ನೋವುಗಳ ಹಂಚಿಕೊಳ್ಳುವ ಕನಸುಂಟು,
ಅದನ್ನರ್ಥೈಸಿಕೊಳ್ಳುವ ಮನಸೆಲ್ಲುಂಟು..
ಅರ್ಭಟಿಸಿದೆ ಎಲ್ಲೆಡೆ ಕಟುತನದ ಮಾತು ಮತ್ತು ವಿಚಾರ
ಇದರ ಮುಂದೆ ನಡೆವುದೇ ನಿನ್ನಲ್ಲಿ ಅಡಗಿರುವ ಆಚಾರ ?
ಎಲ್ಲರಿಗೂ ತಿಳಿಯದು ನಿನ್ನ ಈ ಮರ್ಮ
ತಿಳಿದವರು ಬಿಡಲಾರರು ನಿನ್ನನ್ನು, ಸುಡುತಿದ್ದರೂ ಚರ್ಮ..
ಕಾಲ ಕಾಲಕ್ಕೂ ಕಾಲವೆಸಗುತ್ತಿದೆ ನಿನ್ನ ಮೇಲೆ ಸವಾಲು
ಸದ್ದಿಲ್ಲದೇ ನೀಡುತ್ತಿರುವೆ ನೀನದರ ಜವಾಬು
ನೀ ಧರಿತ್ರಿ, ನೀ ಪ್ರಕೃತಿ, ನೀ ನನ್ನ ತಾಯಿ,
ಕಡೆಗಣಿಸಿದರೂ ಕಾಯುವೆ ನೀ ಅಪೇಕ್ಷಾ ರಹಿತ
ನೀನಿರದೋಡೆ ಬಿಡಬೇಕಾದೀತು ಬಾಯಿ ಬಾಯಿ
ನಿನ್ನಿಂದಲೇ ನೆಲೆಸಿಹುದು ಸುಖವು ಶಾಂತಿಯಾ ಸಹಿತ
--
ವಾಸುದೇವ್ ಆನಂದ್ ಬಿ
superb........:):):)lots of meaning hidden in it.....
ReplyDelete