Tuesday, April 17, 2012

ನೋವು

ಮನಸ್ಸಿಗಾದ ಗಾಯದ ನೋವು
ಏನೇ ಇದ್ದರೂ,ಸಿಕ್ಕರೂ, ಮಾಯದಾ ನೋವು
ಮನಸ್ಸೇ ಸತ್ತರೂ, ಸಾಯದಾ ನೋವು
ಪ್ರೀತಿ ಹೊರತು ಬೇರಾವುದರಿಂದಲೂ ಹೋಗದಾ ನೋವು

ನಿನಗಾದ ನೋವು ಬೇರೆಯವರಿಗೂ ಉಂಟು
ಯಾರನ್ನೂ ಬಿಡದು ಕರ್ಮದಾ ಗಂಟು
ನೋವಲ್ಲೂ ಕಾಣುವುದು ಹುಸಿ ಸುಖಗಳು ನೂರೆಂಟು
ಇದನ್ನೇ ನಂಬಿ ಮುನ್ನಡೆದರೆ ಜೀವನ ಕಗ್ಗಂಟು

ನೋವಿನ ಅಂತರಾಳವನ್ನು ನಿನ್ನಲ್ಲಿ ಹುಡುಕು
ನೋವಿನ ನೆರಳಲ್ಲಿ ಮಾಡದಿರು ಕೆಡಕು
ಪರಮಾತ್ಮನ ಪ್ರೀತಿ ತತ್ವವ ತಿಳಿದು ಬದುಕು
ಆಗ ಪಡೆಯುವೆ ನೋವಿನಿಂದ ಮುಕ್ತಿ, ಜೀವನದಲ್ಲಿ ತೃಪ್ತಿ...
ವಾಸುದೇವ್ ಆನಂದ್ ಬಿ

2 comments:

  1. antharalada maathu..... manasige thakithu ... halee gaaayada novu maru kanisithu.... novina neralali kalitha paata noorentu...
    horagade baaa yendu kare yuva manassondake kruthagnathe maathu....
    aaaa haaduva athmake chira runi.....
    Thank u Vasu!

    ReplyDelete
  2. @asha : thank u sooo much :)
    nimma ee abhimanakke naanoo chira runi :)

    ReplyDelete