Monday, May 21, 2018

ಕಾರ್ಮೋಡ

ಇಂದಿನ ಕಾರ್ಮೋಡ ನನ್ನ ಮನಸ್ಸನ್ನೇ ಬಿಂಬಿಸಿದಂತಿದೆ
ಎಲ್ಲವೂ ಮಸುಕು, ಎಲ್ಲೆಡೆ ಕತ್ತಲೆ !!
ನನ್ನ ಕಣ್ಣೀರಿಗೆ ಜೊತೆ ಕೊಡಲು ತಾನೂ ಮಳೆ ಸುರಿಸಿದಂತಿದೆ

ಮನದ ದುಗುಡ ಗುಡುಗಾಗಿ ಕೇಳಿದಂತಿದೆ
ಆಸೆಯೆಂಬ ಬೆಳಕು ಮಿಂಚಂತೆ ಮರೆಯಾಗುತ್ತಿದೆ

ಇದಕ್ಕೆಲ್ಲ ಕಾರಣ ನಾನೇ ಎಂದು ಹಿಂದಿರುವ ಸೂರ್ಯ ನೊಂದಿದ್ದಾನೆ
ಆದರೆ ಮೋಡದ ಮರೆಯಿಂದ ಇಣುಕುತ್ತಿರುವ ಆಶಾ ಕಿರಣವೂ ಅವನ್ನದ್ದೇ ಆಗಿರುವುದು ಅವನಿಗೆ ತಿಳಿಯದ್ದಾಗಿದೆ  ---- ವಾಸು