Thursday, July 27, 2017

ಸೂರ್ಯಾಸ್ತದ ನಂತರದ ಹೊರತು, ಪ್ರಜ್ವಲಿಸುವ ದೀಪದ ಬೆಳಕು,
ಬೀಜ ಬಿತ್ತನೆಯ ಸಮಯದ ಹೊರತು, ಧಾರಾಕಾರವಾಗಿ ಸುರಿವ ಮಳೆ,
ಉರಿವ ಬಿಸಿಲಲ್ಲಿ ಬೆವರಿಳಿವ ಹೊತ್ತು ಹೊರತು ಆಹ್ಲಾದ ಕೊಡುವ ತಂಗಾಳಿ,
ಬೆಳೆಗಳನ್ನು ಬೆಳೆವ ಸಮಯದ ಹೊರತು, ಫಲವತ್ತಾದ ಭೂಮಿ 

ಮಧು ಮಾಸ ಹೊರತು, ಕೋಗಿಲೆ ಹಾಡಿಗಾಗಿ ಕಾಯುವ ಕಿವಿ ,
ಗುಡಿಯೊಳಗೆ ದೇವರ ಮುಂದೆ ನಿಂತ ಸಮಯದ ಹೊರತು, ಸೌಂದರ್ಯವನ್ನು ಕಣ್ಣ್ತುಂಬಿಕೊಳ್ಳುವ ಕಣ್ಣು, 
ಪ್ರೀತಿ ವಿಶ್ವಾಸಗಳ ಮಾತನ್ನು  ಹೊರತು, ಪಟಪಟನೆ ಮಾತಾಡುವ ಬಾಯಿ, 
ತನ್ನದು ಎಂಬ ಭಾವನೆಯನ್ನು ಹೊರತು, ಎಲ್ಲ ಸೌಕರ್ಯವನ್ನು ನೀಡುವ ಮಣ್ಣು,


ದಯೆ ಯಾಚಿಸಿ ಬಂದಾಗ ಹೊರತು, ಕೈ ಮೀರಿ ಕೊಡುವ ಕರುಣೆ,
ಜೀವದ ಸಂಗಾತಿ ಅಪೇಕ್ಷಿಸುವ ಕಾಲದ ಹೊರತು, ಮನಸ್ಪೂರ್ತಿಯಾಗಿ ತೋರುವ ಪ್ರೀತಿ,
ಶಾಂತಿ ಸಹನೆಯನ್ನು ಹೊರತು, ಜೀವಿಸುವ ಜೀವನ,
ಜೀವನದ ನಿಜ ಅರ್ಥ ಅರಿಯದ ಹೊರತು, ಜೀವನವನ್ನೇ ಗೆದ್ದ ಬದುಕು 

ಆಪತ್ಕಾಲದಲ್ಲಿ ಹೊರತು, ಜೀವಕ್ಕೆ ಜೀವ ಕೊಡುವ ಗೆಳೆಯ 
ಸಂಸ್ಕಾರದ ಹೊರತು, ಬೇರೆಲ್ಲವನ್ನೂ ಧಾರೆಯೆರೆದ ತಂದೆ  ತಾಯಿ, 
ಕೊನೆಗಾಲದ ಹೊರತು, ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವ ಮಗ,
ಮುಕ್ತಿಯನ್ನು ಹೊರತು, ಕೇಳಿದೆಲ್ಲವನ್ನೂ ಕೊಡುವ ದೇವರು,

                                       ವ್ಯರ್ಥ